ಇತ್ತಲ ಮಂಡಲ-
ಜಿಮ್ನೊಫಿಯಾನ	ಅಥವಾ ಏಪೋಡ ಎಂಬ ವಿಭಾಗಕ್ಕೆ ಸೇರಿದ ಒಂದು ದ್ವಿಚರಪ್ರಾಣಿ (ಇಕ್ತಿಯೋಫಿಸ್). ಕಾಲಿಲ್ಲದ ಈ ದ್ವಿಚರಿಗಳು ಉಷ್ಣವಲಯದ ಚೌಗು ಪ್ರದೇಶಗಳಲ್ಲೂ ಕೊಳೆಯುತ್ತಿರುವ ಎಲೆ ಮರಮುಟ್ಟುಗಳಲ್ಲೂ ವಾಸಿಸಿ ಕ್ರಿಮಿಕೀಟಾದಿಗಳನ್ನು ತಿಂದು ಜೀವಿಸುತ್ತವೆ. ಚರ್ಮ ಲೋಳೆಗಟ್ಟಿರುತ್ತದಲ್ಲದೆ ಕೊಂಚ ಸುಕ್ಕಾಗಿಯೂ ಇದೆ. ಮೂಗಿನ ಹಿಂದೆ ಎರಡು ಚಿಕ್ಕದಾದ ಕರಬಳ್ಳಿಗಳಿವೆ. ಕಿವಿಗಳಿಗೆ ತಮಟೆ ಇಲ್ಲ. ಬಾಲ ಮೊಂಡು. ಸುರುಳಿ ಸುತ್ತಿಕೊಂಡು ಹೆಣ್ಣು ಪ್ರಾಣಿ ಮೊಟ್ಟೆಗಳನ್ನು ರಕ್ಷಿಸುತ್ತದೆ. ಈ ಗುಂಪಿಗೆ ಸೇರಿದ ಕೆಲವು ಪ್ರಭೇದಗಳು ಮೈಸೂರು ಮತ್ತು ರಾಜ್ಯದ ನಾಡಿನ ಮಲೆನಾಡು ಪ್ರದೇಶಗಳಲ್ಲಿ ಜೀವಿಸುತ್ತವೆ.		 
 (ಎಂ.ಡಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ